ಸಂಘದ ಉಗಮ
ಸ್ಥಾನ
12-6-1965 
ಎಲ್ಲಾ ಚಟುವಟಿಕೆಗಳ ಕಾರ್ಯಸ್ಥಾನ 10 ಚ.ಅಡಿ ಉದ್ದಳತೆಯ
ಕೊಠಡಿ 

ಸಂಘದ
ತೃತೀಯ
ವಾರ್ಷಿಕೋತ್ಸವ  1968
ಹಿರಿಯರಾದ
ಪಂಡಿತ ಶ್ರೀ ಶಿವಮೂರ್ತಿ ಶಾಸ್ತ್ರಿಗಳು
, ಡಾ. ಜಿ.ಎಸ್.ಎಸ್ ಮುಂತಾದವರು

1. ಸ್ಥಾಪನೆ:


1. 1 ಈ ವಿಶ್ವದಲ್ಲಿ ಮಾನವ ಸಮಾಜ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸಮಾಜ ಸೇವಾ ಕ್ಷೇತ್ರ ಪಥ ಕಂಡುಕೊಂಡಿದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸ್ವಯಂ ಸೇವಾ ಚಟುವಟಿಕೆಗಳು ಆಧುನಿಕ ಭಾರತ ಕಟ್ಟುವಲ್ಲಿ ಪ್ರಮುಖವಾಗಿ ಕಾರ್ಯನಿರತವಾದವು. ಅಂತಹ  ಪ್ರಯತ್ನದಲ್ಲಿ ಕೆಲವು ತರುಣರ ಕನಸುಗಳು ಉದಯಭಾನು ಕಲಾಸಂಘದ ಮೂಲಕ 1965ರ ಜೂನ್ 12 ರಂದು ನನಸಾದವು. 


ಇತ್ತೀಚೆಗೆ ಉದಯಭಾನು ಉನ್ನತ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗಿದ್ದುನಾಲ್ಕು ಅಧ್ಯಯನಾಂಗಗಳಡಿಯಲ್ಲಿ ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ನಿರಾಡಂಬರ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಭಾಷೆ-ಸಾಹಿತ್ಯ ಮತ್ತು ಸಂಸ್ಕೃತಿವಿಜ್ಞಾನ ಮತ್ತು ತಂತ್ರಜ್ಞಾನವಾಣಿಜ್ಯ ಮತ್ತು ನಿರ್ವಹಣ ಹಾಗೂ ಸಮಾಜ ವಿಜ್ಞಾನ ಅಧ್ಯಯನಾಂಗಗಳು ಕಾರ್ಯೋನ್ಮುಖವಾಗಿವೆ.


1.2 ಸಂಘವು  ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.  ಸಂಘವು ಅವಕಾಶವಂಚಿತ ಮತ್ತು ಅಶಕ್ತ ವರ್ಗದ ಜನರಿರುವ ಪ್ರದೇಶದಲ್ಲಿ ನೆಲೆಗೊಂಡಿದೆ. ಅಂತಹ ಸಮುದಾಯಕ್ಕೆ ಸಾಹಿತ್ಯಿಕಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಬದುಕನ್ನು ಕಟ್ಟಿಕೊಡುವ ಶಿಕ್ಷಣ ಮತ್ತು ಆರೋಗ್ಯ ಸಂರಕ್ಷಣೆ ಬಹು ಮುಖ್ಯ ಎನಿಸಿದೆ.

1.3 ಸಂಘವು ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆಯಡಿ ಒಂದು ನೋಂದಾಯಿತ ಸಂಸ್ಥೆ. ಇದು ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಸಂಘದ ಸದಸ್ಯರಿಂದ ಆಯ್ಕೆಯಾದ ಒಂದು ವ್ಯವಸ್ಥಿತವಾದ ಸಮಿತಿಯಿಂದ ನಿರ್ವಹಿಸಲಾಗುತ್ತಿದೆ.  ಸಂಘವು  ಭಾರತೀಯ  ವರಮಾನ ತೆರಿಗೆ  ಕಾಯಿದೆ  1961ರಡಿಯಲ್ಲಿ  ವಿಧಿ  ಸಂಖ್ಯೆ  80(ಜಿ)ನಂತೆ  ಮನ್ನಣೆ ಪಡೆದಿದೆ.  




2. ತ್ರೈವಾರ್ಷಿಕ ಕ್ರಿಯಾ  ಯೋಜನೆ


ಇಲ್ಲಿಯವರೆಗೆ  15 ಕ್ರಿಯಾ ಯೋಜನೆಗಳ ಮೂಲಕ  ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ, ಶಿಕ್ಷಣ, ನಾಗರೀಕ  ಅರೋಗ್ಯ, ಮಹಿಳಾ-ಯುವಜನ ಸಶಕ್ತೀಕರಣ ಕ್ಷೇತ್ರಗಳಲ್ಲಿ ವಿಶಿಷ್ಟ ಹಾಗೂ ದೀರ್ಘಕಾಲೀನ  ಕ್ರಿಯಾತ್ಮಕ ಯೋಜನೆಗಳ ಮೂಲಕ  ಸತತ 50 ವರ್ಷಗಳಿಂದಲೂ ಸಕಾಲಿಕವೂ  ಸಾಮಾಜಿಕ  ಬದುಕಿಗೆ  ಪೂರಕವೂ  ಆದ  ಸೇವಾ ಕಾರ್ಯಗಳ ಮೂಲಕ  ಸಮಾಜದ ಅಭ್ಯುದಯಕ್ಕೆ  ಶ್ರಮದಾನ.


3. ಕಾರ್ಯಸಾಧನೆ

ಸಂಘವು ರಾಜ್ಯದ  ಸರ್ವತೋಮುಖ ಅಭಿವೃದ್ಧಿಗೆ ಸಲ್ಲಿಸಿರುವ  ಅನುಮಪ ಸೇವೆಯನ್ನು  ಗುರುತಿಸಿ ಕರ್ನಾಟಕ  ರಾಜ್ಯ ಸರ್ಕಾರವು  ಸುವರ್ಣ  ಕರ್ನಾಟಕ  ಮಹೋತ್ಸವ  ವರ್ಷ – 2005ರಲ್ಲಿ ಸಂಘಕ್ಕೆ  ರಾಜ್ಯ  ಪ್ರಶಸ್ತಿಯನ್ನು  ನೀಡಿ  ಗೌರವಿಸಿದೆ.  


4.  ನಗರಪಾಲಿಕೆ ಆಟದ ಮೈದಾನಕ್ಕೆ  “ಉದಯಭಾನು ಕಲಾಸಂಘ ಮಕ್ಕಳ ಆಟದ ಮೈದಾನ” ಎಂದು  ನಾಮಕರಣ, ತನ್ಮೂಲಕ  ಸಂಘಕ್ಕೆ  ಸಮಾಜದ  ಪೌರಸನ್ಮಾನ.


5.  ವಿಶ್ವೇಶ್ವರಪುರ  ಡಯಾಗನಲ್ ರಸ್ತೆಗೆ  ಸಂಘದ  ಪ್ರಯತ್ನದಿಂದ  “ಡಾ. ಅ.ನ. ಕೃಷ್ಣರಾವ್ ರಸ್ತೆ” ಎಂದು ನಾಮಕರಣ.  


6. ಸಂಘವು ಜೂನ್ 2014 ರಿಂದ  ತನ್ನ  ಸುವರ್ಣ ಮಹೋತ್ಸವ ಆಚರಣೆ  ಪ್ರಾರಂಭಿಸಿ,  ಸುವರ್ಣ ಮಹೋತ್ಸವದ  ಸಮಾರೋಪ  ಸಮಾರಂಭವನ್ನು  ಫೆಬ್ರವರಿ  2016ರಲ್ಲಿ  ಆಚರಿಸಿದೆ.


7.  ಸಂಘದ ಒಂದು  ಸುಸಜ್ಜಿತ ಸಾಂಸ್ಕೃತಿಕ ವೇದಿಕೆ – ಉದಯಭಾನು ಸಾಂಸ್ಕೃತಿಕ ಭವನ ಕಾರ್ಯನಿರ್ವಹಿಸುತ್ತಿದೆ.


8.  ಸ್ವಾತಂತ್ರ್ಯೋತ್ತರ  ಕನ್ನಡ  ಸಾಹಿತ್ಯ ಮತ್ತು  ಸಂಸ್ಕೃತಿ, ಆಸ್ವಾದ, ಕೆಂಪೇಗೌಡನಗರ  ದರ್ಶನ, ಬೆಂಗಳೂರು ದರ್ಶನ (1975) ಮುಂತಾದ  ಆಕರ  ಗ್ರಂಥಗಳು, ಕಲಾವಿಕಾಸ  ವಾರ್ಷಿಕ  ಸಂಚಿಕೆ  ಪ್ರಕಟಣೆ ಹಾಗೂ  ಸಂಘದ  ಮುಖವಾಣಿ  ಉದಯ  ಸೌರಭ ತ್ರೈಮಾಸಿಕ  ಪ್ರಕಟಣೆ.


9. ಸಮಾಜಮುಖಿ ಸಾಹಿತ್ಯ ಕ್ಷೇತ್ರದಲ್ಲಿ  ಅಂತ್ಯಂತ  ಮೌಲಿಕ ಹಾಗೂ  ಅಪರೂಪದ ಪ್ರಯತ್ನ ಎಂದು ಸಾರ್ವಜನಿಕ ಮನ್ನಣೆ  ಪಡೆದಿರುವ  “ಬೆಂಗಳೂರು ದರ್ಶನ” (2005) ಗ್ರಂಥ ಪ್ರಕಟಣೆ.  ಈ ಗ್ರಂಥದ  ಪರಿಷ್ಕೃತ  ವಿಸ್ತೃತ  ಆವ್ರತ್ತಿ 3000 ಪುಟಗಳಲ್ಲಿ 3 ಸಂಪುಟಗಳಾಗಿ  ಪ್ರಕಟವಾಗಿವೆ.


10.  ಉನ್ನತ  ಅಧ್ಯಯನ ಮಾಲೆಯಲ್ಲಿ ಮೌಲಿಕ  ಪುಸ್ತಕಗಳ  ಪ್ರಕಟಣೆ.  ಸುವರ್ಣ  ಪುಸ್ತಕ  ಮಾಲೆಯಡಿಯಲ್ಲಿ  ನಾಡಿನ  ಎಲ್ಲ  ಜಿಲ್ಲೆಗಳಿಗೆ ಪ್ರಾತಿನಿಧ್ಯ  ನೀಡಿ  ವಿವಿಧ  ಕ್ಷೇತ್ರಗಳಲ್ಲಿ  ಸಾಧಕರ  50 ಪುಸ್ತಕಗಳು ಬಿಡುಗಡೆಯಾಗಿವೆ.  ಬೆಳ್ಳಾವೆ ವೆಂಕಟನಾರಣಪ್ಪ ಅವರು ಸಂಪಾದಿಸಿದ ‘ವಿಜ್ಞಾನ’ ಪತ್ರಿಕೆ (1918 ಮತ್ತು 1919) ಸಂಕಲನ, ‘ಕನ್ನಡದಲ್ಲಿ  ವಿಜ್ಞಾನ ಸಂವಹನೆ‘, ‘ಮಾಧ್ಯಮ ಕರ್ನಾಟಕ‘ ಮುಂತಾದ  ಗ್ರಂಥಗಳ  ಪ್ರಕಟಣೆ, ರಾಜ್ಯ-ರಾಷ್ಟ್ರಮಟ್ಟದ ವಿಚಾರಗೋಷ್ಠಿ – ಕಮ್ಮಟಗಳನ್ನು  ಕೈಗೊಳ್ಳಲಾಗಿದೆ.  


11. ಯುವಜನರಿಗೆ  ಉದ್ಯೋಗಾಧಾರಿತ  ಬದುಕನ್ನು ಕಟ್ಟಿಕೊಡುವ ಹಲವು ಡಿಪ್ಲೊಮ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ.  ಮೊದಲ  ಬಾರಿಗೆ  ಶಾಸ್ತ್ರೀಯ  ಕನ್ನಡದಲ್ಲಿ  ಸ್ನಾತಕೋತ್ತರ ಡಿಪ್ಲೊಮ, ಕಂಪೂಟರ್ ಶಿಕ್ಷಣದಲ್ಲಿ  ಡಿಪ್ಲೊಮ ಮತ್ತು  ಫೈನಾನ್ಷಿಯಲ್ ಅಕೌಂಟಿಂಗ್ ಅಂಡ್ ಆಡಿಟಿಂಗ್ ಡಿಪ್ಲೊಮ ಶಿಕ್ಷಣ  ಪ್ರಾರಂಭಿಸಲಾಗಿದೆ.


12.  ಸ್ನಾತಕೋತ್ತರ  ಕನ್ನಡ (ಎಂ.ಎ.) ವಿದ್ಯಾರ್ಥಿಗಳಿಗೆ  ಮಾರ್ಗದರ್ಶನ ತರಗತಿಗಳು.


13.  ವಿದ್ಯೆಯಲ್ಲಿ  ಹಿಂದುಳಿದ  ಎಸ್.ಎಸ್.ಎಲ್.ಸಿ., ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಕಳೆದ 35 ವರ್ಷಗಳಿಂದಲೂ  ವರ್ಷಂಪ್ರತಿ 750-1000 ವಿದ್ಯಾರ್ಥಿಗಳಿಗೆ  ಉಚಿತ  ಪಾಠ ಪ್ರವಚನ ತರಗತಿಗಳು.  ಹಿರಿಯ  ಅಧ್ಯಾಪಕರಿಗೆ  “ಉದಯಭಾನು ವಿದ್ಯಾರತ್ನ” ಪ್ರಶಸ್ತಿ  ಪ್ರದಾನ.


14.  ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ  ಆರ್ಥಿಕ ನೆರವು, “ಉದಯಭಾನು  ವಿದ್ಯಾರ್ಥಿ ಪತಿಭಾ ಪುರಸ್ಕಾರ” ಪ್ರದಾನ, ವಿದ್ಯಾರ್ಥಿ ಆಕರ ಗ್ರಂಥ ಭಂಡಾರ ಸ್ಥಾಪನೆ – ನಿರ್ವಹಣೆ.


15.  ಕೆಂಪೇಗೌಡ ಬಡಾವಣೆಯ  ಸಮಗ್ರ ಅಭಿವೃದ್ಧಿಗೆ 1977ರಲ್ಲಿ ನೀಲನಕ್ಷೆ ತಯಾರಿಕೆ, ನಗರಪಾಲಿಕೆ ಸಹಕಾರದಿಂದ  ಪೌರಸೌಳಭ್ಯಗಳ ಅಭಿವೃದ್ಧಿ.


16. ಬಸವನಗುಡಿ ರಸ್ತೆಯಲ್ಲಿ  ರೂ. 100 ಕೋಟಿಗಳ ಮೌಲ್ಯದ  ಮಕ್ಕಳ ಆಟದ  ಮೈದಾನ ಸಂರಕ್ಷಣೆ ಮತ್ತು  ಅಭಿವೃದ್ಧಿಗಾಗಿ ಮೂರು ದಶಕಗಳ ನಿರಂತರ ಯಶಸ್ವೀ ಹೋರಾಟ.


17.  ಉಚಿತ ವೈದ್ಯಕೀಯ ಸಲಹೆ ಮತ್ತು  ಔಷದೋಪಚಾರ, ಆರೋಗ್ಯ ತಪಾಸಣಾ ಶಿಬಿರಗಳು, ದತ್ತಿನಿಧಿಗಳು, ನಾರಾಯಣ  ನೇತ್ರಾಲಯದ ಸಹಯೋಗದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಪೊರೆ ಶಸ್ತ್ರಚಿಕಿತ್ಸೆ ಶಿಬಿರ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು  ಸಂಶೋಧನಾ  ಸಂಸ್ಥೆಯ ಸಹಕಾರದಿಂದ  ಉಚಿತ ಹೃದಯ ತಪಾಸಣಾ ಶಿಬಿರ, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸಹಯೋಗದಿಂದ  ಕಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು  ನಡೆಸಿಕೊಂಡು  ಬರಲಾಗುತ್ತಿದೆ.  


18.  ನಿರುದ್ಯೋಗಿ ಮಹಿಳೆಯರು ಮತ್ತು ಯುವಕರ ಸಶಕ್ತೀಕರಣ ಯೋಜನೆ ಅಂಗವಾಗಿ ಉಚಿತ ಕಂಪ್ಯೂಟರ್ ಶಿಕ್ಷಣ ಮತ್ತು ತರಬೇತಿ ಕೇಂದ್ರ ಸ್ಥಾಪನೆ.