ಸಂಘದ ಉನ್ನತ ಅಧ್ಯಯನ ಕೇಂದ್ರಕ್ಕೆ ಪೂರಕವಾಗಿ ಸಂಘದ ವತಿಯಿಂದ ಡಿಜಿಟಲ್ ಲೈಬ್ರರಿ ಹಾಗೂ ವಿಶೇಷ ಹಾಗೂ ಅಮೂಲ್ಯ ಆಕರ ಗ್ರಂಥಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯವುಳ್ಳ ವಿಶೇಷ ಆಕರ ಗ್ರಂಥ ಭಂಡಾರವನ್ನು ತಜ್ಞರ ಸಹಕಾರದಿಂದ ಯೋಜಿಸಲಾಗಿದೆ.
ಸಂಘವು ಜೂನ್ 2014ರಿಂದ ತನ್ನ ಸುವರ್ಣ ಮಹೋತ್ಸವ ಆಚರಣೆ ಪ್ರಾರಂಭಿಸಿ, ಸುವರ್ಣ
ಮಹೋತ್ಸವ ಸಮಾರೋಪ ಸಮಾರಂಭವನ್ನು ಫೆಬ್ರವರಿ 2016ರಲ್ಲಿ ಆಚರಿಸಿದೆ.
ಬೆಂಗಳೂರು ದರ್ಶನ (1975), ಕೆಂಪೇಗೌಡನಗರ ದರ್ಶನ (1980), ಆಸ್ವಾದ-ಪ್ರೊ. ಎಂ.ವಿ. ಸೀತಾರಾಮಯ್ಯ ಅಭಿನಂದನ ಗ್ರಂಥ (1983), ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ (1993), ಮುಂತಾದ ಆಕರ ಗ್ರಂಥಗಳು, ‘ಕಲಾವಿಕಾಸ’ ವಾರ್ಷಿಕ ಸಂಚಿಕೆ ಪ್ರಕಟಣೆ ಹಾಗೂ ಸಂಘದ ಮುಖವಾಣಿ ‘ಉದಯ ಸೌರಭ’ ತ್ರೈಮಾಸಿಕ ಪ್ರಕಟಣೆ.
ಸಮಾಜಮುಖಿ ಸಾಹಿತ್ಯ ಕ್ಷೇತ್ರದಲ್ಲಿ ಅಂತ್ಯಂತ ಮೌಲಿಕ ಹಾಗೂ ಅಪರೂಪದ ಪ್ರಯತ್ನ ಎಂದು ಸಾರ್ವಜನಿಕ ಮನ್ನಣೆ ಪಡೆದಿರುವ “ಬೆಂಗಳೂರು ದರ್ಶನ” (2005) ಗ್ರಂಥ ಪ್ರಕಟಣೆ. ಈ ಗ್ರಂಥದ ಪರಿಷ್ಕೃತ ವಿಸ್ತೃತ ಆವ್ರತ್ತಿ 3000 ಪುಟಗಳಲ್ಲಿ 3 ಸಂಪುಟಗಳಾಗಿ ಪ್ರಕಟವಾಗಿವೆ.
ಉನ್ನತ ಅಧ್ಯಯನ ಮಾಲೆಯಲ್ಲಿ ಮೌಲಿಕ ಪುಸ್ತಕಗಳ ಪ್ರಕಟಣೆ. ಸುವರ್ಣ ಪುಸ್ತಕ ಮಾಲೆಯಡಿಯಲ್ಲಿ ನಾಡಿನ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರ 50 ಪುಸ್ತಕಗಳು ಬಿಡುಗಡೆಯಾಗಿವೆ.
ಬೆಳ್ಳಾವೆ ವೆಂಕಟನಾರಣಪ್ಪ ಅವರು ಸಂಪಾದಿಸಿದ ‘ವಿಜ್ಞಾನ’ ಪತ್ರಿಕೆ (1918 ಮತ್ತು 1919) ಸಂಕಲನ, ‘ಕನ್ನಡದಲ್ಲಿ ವಿಜ್ಞಾನ ಸಂವಹನೆ‘, ‘ಮಾಧ್ಯಮ ಕರ್ನಾಟಕ‘ ಮುಂತಾದ ಗ್ರಂಥಗಳ ಪ್ರಕಟಣೆ, ರಾಜ್ಯ-ರಾಷ್ಟ್ರಮಟ್ಟದ ವಿಚಾರಗೋಷ್ಠಿ – ಕಮ್ಮಟಗಳನ್ನು ಕೈಗೊಳ್ಳಲಾಗಿದೆ.




