ಉದಯಭಾನು ಕಲಾಸಂಘವು 1965ರಲ್ಲಿ ಸ್ಥಾಪನೆಯಾದ ದಿನದಿಂದಲೂ ಸಾರ್ವಜನಿಕರಲ್ಲಿ ವಾಚನಾಭಿರುಚಿಯನ್ನು ಉಳಿಸಿ ಬೆಳೆಸಲು ಉಚಿತ ವಾಚನಾಲಯವನ್ನು ನಿರ್ವಹಿಸಿಕೊಂಡು ಬರುತ್ತಿದೆ. ವಾಚಕರಿಗೆ ನಾಡಿನ ಪ್ರಮುಖ ದಿನಪತ್ರಿಕೆಗಳು, ಸಾಪ್ತಾಹಿಕ, ಮಾನಸಿಕ, ಪಾಕ್ಷಿಕ ಹಾಗೂ ನಿಯತಕಾಲಿಕಗಳನ್ನು ಒದಗಿಸಲಾಗುತ್ತಿದೆ. ಮೊದಲಿಗೆ ಸಂಘ ಆರಂಭವಾದ ಸ್ಥಳದಲ್ಲಿ ನಿರಂತರವಾಗಿ ನಡೆದ ವಾಚನಾಲಯದ ಜೊತೆಗೆ ಸಂಘದ ಕೇಂದ್ರ ಕಛೇರಿಯಲ್ಲಿ ಸಹಾ ವಾಚನಾಲಯ ನಿರ್ವಹಿಸಲಾಗುತ್ತಿದೆ.